ಬಾಗಲಕೋಟ ಜಿಲ್ಲೆ ಎರಡು ದಶಕಗಳ ಸಾಹಿತ್ಯ ಮತ್ತು ನೋಟ
ಡಾ.ಪ್ರಕಾಶ ಗ.ಖಾಡೆ
ಬಾಗಲಕೋಟ ಜಿಲ್ಲೆ ರಚನೆಯಾಗಿ ಎರಡು ದಶಕಗಳು ತುಂಬಿದವು.ಈ ಒಂದು ಕಾಲಘಟ್ಟದಲ್ಲಿ ಜಿಲ್ಲೆಯಲ್ಲಿ ಜರುಗಿದ ಸಾಹಿತ್ಯ,ಸಾಂಸ್ಕøತಿಕ ಸಂದರ್ಭಗಳನ್ನು ಅವಲೋಕಿಸುವ ಹೊತ್ತಿನಲ್ಲಿ ನಮಗೆ ಢಾಳಾಗಿ ನಿರಾಸೆಯೇ ಕಾಡುತ್ತದೆ.ಬಾದಾಮಿ ಚಾಲುಕ್ಯರ ಸಾಂಸ್ಕøತಿಕ ಈ ಬೀಡು ,ರನ್ನ,ಬಸವಣ್ಣವರು ಓಡಾಡಿಕೊಂಡಿದ್ದ ಈ ನೆಲ ಹೊಸ ಜಿಲ್ಲೆಯಾದರೂ ಸಾಂಸ್ಕøತಿಕ ಅಸಾರತೆಯಿಂದ ಬಳಲುವಂತಾಯಿತು. ಇಲ್ಲಿ ನಿಯಮಿತವಾಗಿ ಚಾಲುಕ್ಯ ಉತ್ಸವ,ಸಾಹಿತ್ಯ ಸಮ್ಮೇಳನಗಳು ಜರುಗದೇ ಹೋಗಿದ್ದು ಈ ಜಿಲ್ಲೆಯ ಪ್ರಜ್ಞಾವಂತ ಸಾಹಿತಿ,ಕಲಾವಿದರು ಪರಿತಪಿಸುವಂತಾಗಿದೆ.ಅರ್ಹತೆ ಇದ್ದಾಗಲೂ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಬೇಕಿದ್ದ ರಾವಬಹದ್ದೂರ,ಸತ್ಯಕಾಮ,ಪಿ.ವಿ.ವಜ್ರಮಟ್ಟಿ,ದು,ನಿಂ,ಬೆಳಗಲಿ,ಬ.ಗಿ.ಯಲ್ಲಟ್ಟಿ,ಜೀವಣ್ಣ ಮಸಳಿ,ಎಸ್.ಎಸ್.ಬಸುಪಟ್ಟದ ಅಂಥ ಹಿರಿಯ ಸಾಹಿತಿಗಳು ಕೊನೆಗೆ ಜಿಲ್ಲಾ ಸಾಹಿತ್ಯ ಸಮ್ಮೆಳನಗಳ ಅಧ್ಯಕ್ಷರಾಗುವುದು ಸಾಧ್ಯವಾಗಲಿಲ್ಲ.ಇದಕ್ಕೆ ಪ್ರಧಾನ ಕಾರಣ ಇಲ್ಲಿ ನಿಯಮಿತವಾಗಿ ಸಾಹಿತ್ಯ ಸಮ್ಮೇಳನಗಳು ನಡೆಯದೇ ಇರುವುದು.ಈಗಲೂ ನಮ್ಮ ನಡುವೆ ಇರುವ ಡಾ.ಶ್ರೀರಾಮ ಇಟ್ಟಣ್ಣವರ,ಬಿ.ಆರ್.ಪೊಲೀಸಪಾಟೀಲ, ಡಾ.ಶಿಲಾಕಾಂತ ಪತ್ತಾರ,ರೇಖಾ ಕಾಖಂಡಕಿ,ಜಯವಂತ ಕಾಡದೇವರ,ಜಿ,ಬಿ,ಖಾಡೆ,ಜಿ.ಎಸ್.ವಡಗಾವಿ,ಮಲ್ಲಿಕಾರ್ಜುನ ಹುಲಗಬಾಳಿ,ಅರ್ಜುನ ಕೊರಟಕರ,ಅಣ್ಣಾಜಿ ಪಡತಾರೆ,ಡಾ.ಬಿ.ಕೆ.ಹಿರೇಮಠ,ಅಬ್ಬಾಸ ಮೇಲಿನಮನಿ ಅವರಂಥ ಹಿರಿಯ ಸಾಹಿತಿಗಳನ್ನು ಒಂದೆಡೆ ಕೂಡಿಸಿ ಅವರಿಂದ ಕಿರಿಯ ಸಾಹಿತಿಗಳಿಗೆ ಮಾರ್ಗದರ್ಶನವಾಗುವ,ಅವರ ಸಾಹಿತ್ಯವನ್ನು ಅವಲೋಕಿಸುವ,ರಾಜ್ಯ ಮಟ್ಟದಲ್ಲಿ ಅವರಿಗೆ ಅವಕಾಶಗಳನ್ನು ಕೊಡುವ ಯಾವ ಕೆಲಸಗಳೂ ಜಿಲ್ಲೆಯಲ್ಲಿ ನಡೆಯುತ್ತಿಲ್ಲ.ಈ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಜೀವನದಿ ಕೃಷ್ಣೆ,ಉಪನದಿಗಳಾದ ಘಟಪ್ರಭೆ,ಮಲಪ್ರಭೆಗಳಲ್ಲಿ ನೀರು ಹರಿದು,ನಿಂತು,ತುಂಬಿ,ಖಾಲಿಯಾಗಿ ಹೋಗಿದೆ.ಹಾಗೆಯೇ ಈ ಜಿಲ್ಲೆಯ ಸಾಹಿತ್ಯದ ಒಡಲು ಖಾಲಿಯಾಗುತ್ತಾ ನಡೆದಿದೆ.
ಜಿಲ್ಲೆ ರಚನೆಯಾದ ಹೊಸದರಲ್ಲಿ 2000 ದಲ್ಲಿ ಬಾಗಲಕೋಟೆಯಲ್ಲಿ 68 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುವ ಮೂಲಕ ಮುಳುಗಡೆ ಜಿಲ್ಲೆಯಲ್ಲಿ ಹೊಸದೊಂದು ಸಾಹಿತ್ಯ ವಾತಾವರಣಕ್ಕೆ ನಾಂದಿ ಹಾಡಲಾಯಿತು.ಆದರೆ ಮುಂದೆ ನಡೆದ ಬೆಳವಣಿಗೆಗಳೇ ಬೇರೆ.ಭೌತಿಕವಾಗಿ ರಾಜ್ಯದಲ್ಲಿಯೇ ಗುರುತಿಸುವಂತೆ ನವನಗರದಲ್ಲಿ ನಿರ್ಮಾಣವಾದ ಕಲಾಭವನ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನಗಳು ಸಾಂಸ್ಕøತಿಕ ಕಾರ್ಯಕ್ರಮಗಳಿಲ್ಲದೇ,ಸಾಹಿತ್ಯಾಸಕ್ತರ ಶಕ್ತಿ ಕೇಂದ್ರಗಳಾಗದೇ ಧೂಳು ತಿನ್ನಲು ಬಿಟ್ಟಿರುವುದು ಒಂದು ಪ್ರದೇಶÀದ ಸಾಂಸ್ಕøತಿಕ ಬರಗಾಲವನ್ನು ಸಾರುತ್ತದೆ.
ಇಂಥ ಕೊರತೆಗಳ ನಡುವೆಯೂ ಮರಳುಗಾಡಿನಲ್ಲಿ ಓಯಾಸಿಸ್ ಸಿಕ್ಕಂತೆ ಅಲ್ಲಲ್ಲಿ ಖಾಸಗಿ ಸಂಘ ಸಂಸ್ಥೆಗಳವರು ಸಾಹಿತ್ಯ ,ರಂಗಭೂಮಿ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಜಿಲ್ಲಾ ರಚನೆಯ ಆರಂಭದಲ್ಲಿ ನಮ್ಮನ್ನಗಲಿದ ಗೌರಿ ಕ್ರಿಯೇಶನ್ ಸಂಸ್ಥೆ ಮೂಲಕ ಪ್ರಕಾಶ ಕುಲಕುರ್ಣಿ,ದೃವರಂಗ ಸಂಸ್ಥೆ ಮೂಲಕ ಧೃವರಾಜ ದೇಶಪಾಂಡೆ,ನಟೇಶ್ವರ ಕಲಾ ಬಳಗದ ಮೂಲಕ ಬಸವರಾಜ ಹೊಸಮನಿ,ಗ್ರಾಮೀಣ ರಂಗತರಂಗ ಮೂಲಕ ಹೊಳಿಬಸು ಯೆಂಡಿಗೇರಿ ಜಿಲ್ಲೆ ಸಾಂಸ್ಕøತಿಕ ಲೋಕವನ್ನು ಜೀವಂತವಾಗಿಟ್ಟಿದ್ದರು.ಇಂದೂ ಇಳಕಲ್ಲದ ಸ್ನೇಹ ರಂಗ,ಹುನಗುಂದದ ದೃವ ರಂಗ,ಬಾದಾಮಿಯ ವಿಶ್ವಚೇತನ,ಮುಧೋಳದ ಮಧುರ ಮುಧೋಳ,ಬನಹಟ್ಟಿಯ ಮಕ್ಕಳ ಸಂಗಮ,ಜಮಖಂಡಿಯ ಕನ್ನಡ ಸಂಘ,ಬಾಗಲಕೋಟೆಯ ಜಲಜಮಿತ್ರ ರಂಗ ವೇದಿಕೆ,ರಂಗಕೋಟೆ ಬಾಗಿಲುಕೋಟೆ,ಸಹೃದಯ ಸಾಹಿತ್ಯ ವೇದಿಕೆÉ,ಮಕ್ಕಳ ಸಾಹಿತ್ಯ ಸಮಾಗಮ,ಶಿರೂರಿನ ಗ್ರಾಮೀಣ ಸಾಹಿತ್ಯ ವೇದಿಕೆ,ಇಳಕಲ್ಲದ ವಿಜಯ ಚಿತ್ರಕಲಾ ವಿದ್ಯಾಲಯ,ಮಹಾಲಿಂಗಪುರದ ರನ್ನ ವೇದಿಕೆ,ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು,ಗುಳೇದಗುಡ್ಡದ ರಂಗ ಚಿಂತನ ವೇದಿಕೆ,ಲೋಕಾಪುರದ ನಟರಾಜ ಹವ್ಯಾಸಿ ಕಲಾ ತಂಡ ಮೊದಲಾದವುÀ ಸಂಘಟನೆಗಳ ಮೂಲಕ ಇಷ್ಟಲಿಂಗ ಸಿರ್ಸಿ,ಮಹಾಂತೇಶ ಗಜೇಂದ್ರಗಡ.ಡಾ.ಬಸವರಾಜ ಗವಿಮಠ,ಎಸ್ಕೆ ಕೊನೆಸಾಗರ,ಸಂಗಮೇಶ ಕೋಟಿ,ಮಹಾಂತೇಶ ಆವಾರಿ, ಜಲಜಮಿತ್ರ ಬಸವರಾಜ ಮಠ,ಡಾ.ಪ್ರಕಾಶ ಖಾಡೆ,ಉಮೇಶ ತಿಮ್ಮಾಪುರ,ಜಯವಂತ ಕಾಡದೇವರ,ಎಸ್.ಎಸ್.ಹಳ್ಳೂರ,ಮ.ಕೃ.ಮೇಗಾಡಿ,ಶಿವಾನಂದ ಶೆಲ್ಲಿಕೇರಿ,ಡಾ.ನಾಗರಾಜ ನಾಡಗೌಡ,ಚಂದ್ರಕಾಂತ ರಂಗಣ್ಣವರ,ಶಂಕರ ಹೂಗಾರ,ನಾಡೋಜ ಯಲ್ಲವ್ವ ರೊಡ್ಡಪ್ಪನವರ,ಶಾಂತಮ್ಮಾ ಪತ್ತಾರ,ಪ್ರೇಮಾ ಬಾದಾಮಿ,ಉಮಾರಾಣಿ ಬಾರಿಗಿಡದ,ಪ್ರೇಮಾ ಗುಳೇದಗುಡ್ಡ,ಭೀಮನಗೌಡ ಪಾಟೀಲ ಮೊದಲಾದವರು ಜಿಲ್ಲೆಯಲ್ಲಿ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಜರುಗಿಸುವ ಮೂಲಕ ಸಾಹಿತ್ಯ ಮತ್ತು ಸಾಂಸ್ಕøತಿಕವಾಗಿ ಜಿಲ್ಲೆಯನ್ನು ನಾಡಿನಲ್ಲಿಯೇ ಗುರುತಿಸುವಂತೆ ಮಾಡಿದ್ದಾರೆ. ರಾಜ್ಯ ಸರಕಾರ ಜಿಲ್ಲೆಯ ಇಬ್ಬರು ಧೀಮಂತ ಸಾಹಿತಿಗಳ ಹೆಸರಿನಲ್ಲಿ ರನ್ನ ಪ್ರತಿಷ್ಠಾನ ಮತ್ತು ಪಿ.ಬಿ.ದುತ್ತರಗಿ ಪ್ರತಿಷ್ಠಾನಗಳನ್ನು ಸ್ಥಾಪಿಸಿ ಧಾರಾಳವಾಗಿ ಹಣಕಾಸಿನ ನೆರವು ನೀಡಿದೆ.ರನ್ನ ಪ್ರತಿಷ್ಠಾನದಿಂದ ರನ್ನನ ಸಮಗ್ರ ಕೃತಿ ಹಾಗೂ ವಿಚಾರ ಸಂಕಿರಣ ಕೃತಿಗಳು ಪ್ರಕಟವಾಗಿವೆ,ದುತ್ತರಗಿ ಪ್ರತಿಷ್ಠಾನದ ಕೆಲಸ ಮಂದಗತಿಯಿಂದ ನಡೆದಿದ್ದು ಖ್ಯಾತ ನಾಟಕಕಾರ ದುತ್ತರಗಿ ಅವರ ಸಮಗ್ರ ನಾಟಕಗಳ ಮುದ್ರಣ ಕಾರ್ಯ ಆರಂಭವಾಗಬೇಕಿದೆ.
ಜಿಲ್ಲಾ ಸಾಹಿತ್ಯ ಪರಿಷತ್ತು ಹೊಸ ಮತ್ತು ಹಳೆ ತಲೆಮಾರಿನ ಸಾಹಿತಿಗಳಿಗೆ ತವರು ಮನೆ ಇದ್ದಂತೆ.ನಾಡಿನಲ್ಲಿ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ನಡೆದಷ್ಟು ಜಿಲ್ಲೆಯಲ್ಲಿ ನಡೆಯುತ್ತಿಲ್ಲ.ಜಿಲ್ಲೆ ರಚನೆಯಾದ ಆರಂಭದಲ್ಲಿ ಬಿ.ಆರ್.ಪೊಲೀಸಪಾಟೀಲರು ಅಧ್ಯಕ್ಷರಾಗಿದ್ದರು.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜರುಗಿಸುವ ಮೂಲಕ ಒಂದು ಸಾರ್ಥಕ ಕಾರ್ಯ ಮಾಡಿದರು.ನಂತರ ಬಂದ ಅನ್ನದಾನಿ ಹಿರೇಮಠರು ಜಿಲ್ಲಾ ಕ.ಸಾ.ಪ.ಭವನಕ್ಕೆ ಅಡಿಪಾಯ ಹಾಕಿದರು.ಸದಸ್ಯರ ಸಂಖ್ಯೆ,ದತ್ತಿದಾನಿಗಳ ಸಂಖ್ಯೆ ಹೆಚ್ಚಿಸಿದರು.ಡಾ.ವಿಶ್ವನಾಥ ವಂಶಕೃತಮಠರು ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಜರುಗಿಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದರು.ಎಸ್.ಜಿ.ಕೋಟಿ ಅವರ ಕಾಲಕ್ಕೆ ನಿಂತೇ ಹೋಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಚಾಲನೆ ನೀಡಿದರು.ಲೋಕಾಪುರ,ಬಾದಾಮಿಗಳÀಲ್ಲಿ ಜಿಲ್ಲಾ ಸಮ್ಮೇಳನಗಳು,ಬೀಳಗಿ,ಶಿರೂರ,ನಿಂಗಾಪುರ,ಸಾವಳಗಿ ಗ್ರಾಮಗಳಲ್ಲಿ ತಾಲೂಕು ಸಮ್ಮೇಳನಗಳನ್ನು ಜರುಗಿಸಿ ಪರಿಷತ್ತನ್ನು ಜನಮುಖಿಗೊಳಿಸಿದರು.ಆ ಹೊತ್ತಿಗೆ ಆಕರ ಕೃತಿಗಳಲ್ಲದೇ ಸ್ಮರಣ ಸಂಚಿಕೆಗಳು ಸೇರಿ ಮೂರು ವರ್ಷದ ಅವಧಿಯಲ್ಲಿ ಹದಿನಾಲ್ಕು ಕೃತಿಗಳನ್ನು ಕಸಾಪದಿಂದ ಪ್ರಕಟಿಸಿದರು.ಸಾಹಿತ್ಯ ಮತ್ತು ವಿದ್ವತ್ ಪರಂಪರೆ,ಗ್ರಾಮಸಿರಿ,ಹಳಗನ್ನಡ ಸಾಹಿತ್ಯದ ಓದು,ಸಂಶೋಧನಾ ಕಮ್ಮಟ,ನಿಯಮಿತವಾಗಿ ಜಿಲ್ಲೆಯಾದ್ಯಂತ ದತ್ತಿ ಕಾರ್ಯಕ್ರಮಗಳನ್ನು ಜರುಗಿಸಿದ ಕೋಟಿ ಅವರ ಅಧ್ಯಕ್ಷತೆಯ ಕಸಾಪದ ಕಲಾವಧಿ ಒಂದು ಸುವರ್ಣ ಯುಗವಾಗಿತ್ತು.ಮುಂದೆ ಬಂದ ಡಾ.ವಿಜಯಕುಮಾರ ಕಟಗಿಹಳ್ಳಿಮಠರು ಈ ಪರಂಪರೆ ಮುಂದುವರೆಸಿದರು.ಡಾ.ಕಟಗಿಹಳ್ಳಿಮಠರು ಸಾಹಿತ್ಯ ಪರಿಷತ್ತು ಮತ್ತು ಚಾಲುಕ್ಯ ಉತ್ಸವಗಳ ಸಂದರ್ಭಗಳಲ್ಲಿ ಹೊರತಂದ ಆಕರ ಕೃತಿಗಳು ಅಧ್ಯಯನಪೂರ್ಣವಾಗಿವೆ.ಅವರ ಕಾಲಾವಧಿಯೂ ಒಂದು ಸಾರ್ಥಕ ಸಂದರ್ಭ.ಈಗ ಹೊಸ ಕಸಾಪ ಅಧ್ಯಕ್ಷರು ಅಧಿಕಾರಕ್ಕೆ ಬಂದು ವರ್ಷವಾಯಿತು.ಈ ಹೊತ್ತಿಗೆ ಭೌತಿಕವಾಗಿಯೂ ಬರ ಬಿದ್ದಂತೆ,ಕಸಾಪ ಕಾರ್ಯ ಚಟುವಟಿಕೆಗಳಿಗೂ ಬರ ಬಿದ್ದಿದೆ,ನೆರೆಯ ಜಿಲ್ಲೆಗಳಲ್ಲಿ ಜಿಲ್ಲಾ,ತಾಲೂಕು ಮತ್ತು ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿದ್ದರೂ ಇಲ್ಲಿ ಇನ್ನೂ ಅದರ ಉಸಾಬರಿಯೇ ಕೇಳುತ್ತಿಲ್ಲ.
ಹೊಸ ಜಿಲ್ಲೆ ರಚನೆಯಾಗಿ ಎರಡು ದಶಕಗಳು ಸಂದರೂ ಇಲ್ಲಿ ಸಾಹಿತ್ಯಿಕವಾಗಿ ಇನ್ನೂ ನಡೆಯಬೇಕಾದ ಕೆಲಸಗಳು ಸಾಕಷ್ಟಿವೆ.ಜಿಲ್ಲೆಯಲ್ಲಿ ಹುಟ್ಟಿ ನಾಡಿನಲ್ಲಿಯೇ ಹೆಸರಾಗಿದ್ದ ರಾ.ಯ.ಧಾರವಾಡಕರ,ಕೃಷ್ಣಮೂರ್ತಿ ಪುರಾಣಿಕ,ಡಾ.ಬಿ.ಎಸ್.ಗದ್ದಗಿಮಠ,ಬಿಂದು ಮಾಧವ ಕುಲಕರ್ಣಿ,ಶ್ಯಾಮ ಹುದ್ದಾರ,ಶಂಕರ ಕಟಗಿ ಅವರಂಥ ಗಣ್ಯ ಸಾಹಿತಿಗಳನ್ನು ಸ್ಮರಿಸುವ ಕೆಲಸಗಳಾಗಬೇಕು, ಹನಮಂತ ಹಾಲಿಗೇರಿ,ತಿರುಪತಿ ಭಂಗಿ,ಲಕ್ಷ್ಮಣ ಬದಾಮಿ,ಉಮೇಶ ತಿಮ್ಮಾಪುರ,ಕಲ್ಲೇಶ ಕುಂಬಾರ,ಸುರೇಖಾ ಕುಲಕರ್ಣಿ ಅವರಂಥ ಪ್ರಖರ ಯುವ ಕಥೆಗಾರರ ಕಥೆಗಳನ್ನು ಚಿತ್ರ,ಕಿರುಚಿತ್ರವಾಗಿ ರೂಪಿಸಬೇಕಾಗಿದೆ.ಜಿಲ್ಲೆಯ ಬೆಳಕಿಗೆ ಬಾರದ ತಳಸಮುದಾಯಗಳ ಸಾಂಸ್ಕøತಿಕ ಚರಿತ್ರೆಯನ್ನು ಕಟ್ಟಿಕೊಡಬೇಕಾಗಿದೆ,ಅಂತರ್ಜಾಲ ಮಾಧ್ಯಮದ ಮೂಲಕ ಜಿಲ್ಲೆಯ ಹಿರಿಯ ಮತ್ತು ಯುವ ಲೇಖಕರ ಸಾಹಿತ್ಯವನ್ನು ದಾಖಲಿಸಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಾಗಿದೆ.ಈ ಕೆಲಸಗಳೂ ನಡೆದಷ್ಟೂ ಜಿಲ್ಲೆ ನಾಡಿನಲ್ಲಿಯೇ ಸಾಂಸ್ಕøತಿಕವಾಗಿ ಗುರುತಿಸಿಕೊಳ್ಳಲು ಸಾಧ್ಯ.
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ. 9845500890